ವಚನ - 866     
 
ಮನ ನಿಲುಕದು, ಭಾವ ಭಾವಿಸದು ಅರಿವು ಕುರುಹಿಡಿದು ಉಪಮೆ ಸ್ಥಳವಿಡಲರಿಯದು. ಮಂತ್ರತಂತ್ರಗಳಿಗೆಂತೂ ಸಿಲುಕದು. ಜಪ ತಪ ಧ್ಯಾನ ಮೌನಂಗಳಿಗೆ ಅಳವಲ್ಲದ ಘನವದು! ಕಪಿಲಸಿದ್ಧಮಲ್ಲಿಕಾರ್ಜುನನ ನಿಲುವನು ಅಂತಿಂತೆನಬಹುದೆ?