ಮುತ್ತಿನ ವರ್ಣ ಶಂಖಾದಡೇನೊ?
ಸಕ್ಕರೆಯ ವರ್ಣ ಉಪ್ಪಾದಡೇನೊ? ರುಚಿ ಬೇರೆ!
ನೀಲದ ವರ್ಣ ಮೇಲಾದಡೇನೊ?
ಅಂತರ ಮಹದಂತರ ಪಟ್ಟಂತರದ ಪರಿ ಬೇರೆ.
ನೀಲವರ್ಣ ಎಲ್ಲಾ ಎಲ್ಲಾ ವರ್ಣವು ನಿಮ್ಮೊಳಗೆಯು
ಆದಿಗುರು ಕಪಿಲಸಿದ್ಧಮಲ್ಲಿಕಾರ್ಜುನದೇವಾ,
ನೀನೇ ಬಲ್ಲೆ.
Transliteration Muttina varṇa śaṅkhādaḍēno?
Sakkareya varṇa uppādadēno? Ruci bēre!
Nīlada varṇa mēlādaḍēno?
Antara mahadantara paṭṭantarada pari bēre.
Nīlavarṇa ellā varṇavu nim'moḷageyu
ādiguru kapilasid'dhamallikārjunadēva,
nīnē balle.