ರುದ್ರಂಗೆ ಪಾರ್ವತಿಯು, ವಿಷ್ಣುವಿಂಗೆ ಲಕ್ಷ್ಮಿಯು,
ಬ್ರಹ್ಮಂಗೆ ಸರಸ್ವತಿಯು
ಮತ್ತೆ ತೃಣದಶನದ ಫಲದ ಆಹಾರದವರ
ಸುತ್ತಿ ಮುತ್ತಿತ್ತು ನೋಡಾ ಮಾಯೆ;
ಸಪ್ತಧಾತುವ ಮೀರಿ ಪಂಚಭೂತವ ಜರಿದ
ಶರಣರಿಗೋಡಿತ್ತು ಮಾಯೆ,
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Rudraṅge pārvatiyu, viṣṇuviṅge lakṣmiyu,
brahmaṅge sarasvatiyu
matte tr̥ṇadaśanada phalada āhāradavara
sutti mucci nōḍā māye;
saptadhātuva mīri pan̄cabhūtava jarida
śaraṇarigoḍittu māye,
kapilasid'dhamallikārjunā.