•  
  •  
  •  
  •  
Index   ವಚನ - 956    Search  
 
ಲಿಂಗತ್ರಯವಾವುದೆಂದಡೆ ಹೇಳುವೆ: ಅಪರಸ್ಥಾನದಲ್ಲಿಪ್ಪಾತ ಇಷ್ಟ, ಮಧ್ಯಮಸ್ಥಾನದಲ್ಲಿಪ್ಪಾತ ಗುರು, ಆನಂದಸ್ಥಾನದಲ್ಲಿಪ್ಪಾತ ಅಭೇದ್ಯ, ಇದಕ್ಕೆ ಮೂಲಾಧಾರಂಗಳು, ಸರ್ವಸತ್ವದಿಂದ ಕಾಬುದು ಗುರುವ, ಕಂಡು ಮಚ್ಚೂದು ಲಿಂಗವ, ಅವಿರಳವಿಲ್ಲದೆ ನಚ್ಚೂದು ಜಂಗಮವ ಕಪಿಲಸಿದ್ಧಮಲ್ಲಿಕಾರ್ಜುನನ ಕೂಡೂದು.
Transliteration Liṅgatrayavāvudendaḍe hēḷuve: Aparasthānadallippāta iṣṭa, madhyamasthānadallippāta guru, ānandasthānadallippāta abhēdya, idakke mūlādhāraṅgaḷu, sarvasatvadinda kābudu guruva, kaṇḍu maccūdu liṅgava, aviraḷavillade naccūdu jaṅgamava kapilasid'dhamallikārjunana kūḍūdu.