•  
  •  
  •  
  •  
Index   ವಚನ - 977    Search  
 
ವಾಯುವ ನುಂಗಿದ ಬಣ್ಣ, ಬಣ್ಣವ ನುಂಗಿದ ಛಾಯೆ, ಅಂಜನ ಪ್ರವೇಶಮಧ್ಯದಲ್ಲಿ ಲೀಯವಾದೆನಯ್ಯಾ ನಿನ್ನೊಡನೆ; ಲೀಯವಾದೆನಯ್ಯಾ ಸಂಗಸಂಯೋಗ ಸ್ಥಾನದಲ್ಲಿ ನೀಸಹಿತ. ಯೋಗಿಯಾದೆನಯ್ಯಾ ಶುದ್ಧ ಸಿದ್ಧ ಪ್ರಸಿದ್ಧದಲ್ಲಿ ಪ್ರವೇಶಿಸಲೊಡನೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಸೀಮೆಯ ಮೀರಿ ಸಂಬಂಧಿಯಾದೆನು.
Transliteration Vāyuva nuṅgida baṇṇa, baṇṇava nuṅgida baṇṇa, an̄jana pravēśamadhyadalli līyavādenayyā ninnoḍane; līyavādenayyā saṅgasanyōga sthānadalli nīsahita. Yōgyādenayyā śud'dha sid'dha prasid'dhadalli pravēśisaloḍane kapilasid'dhamallikārjunayya, sīmeya mīri sambandhiyādenu.