ವೃಕ್ಷಛಾಯೆಯಲ್ಲಿಹಂಗೆ ನೀನು,
ಸಕಲರಿಗೆ ಸ್ವಾತಂತ್ರ್ಯ ಪದವನೀವೆ, ನಿನಗಿಲ್ಲ.
ನೀನು ನಿಷ್ಕಲದಲ್ಲಿ ನಿರ್ಣೈಸಿ
ಸಕಲದಲ್ಲಿ ಸ್ವಾತಂತ್ರಿಸಿ ಇಪ್ಪೆ.
ಆನಂದವೆಂಬ ಗತಿಯಲ್ಲಿ,
ಸಾನಂದವೆಂಬ ತಾಳವಿಡಿದು ಆಡಲಾಗಿ,
ಕೊಟ್ಟೆನೆಂಬ ಪದವ ಅವರೊಲ್ಲದಿದ್ದಡೆ
ನೀನೆ ಒಚ್ಚತ ಹೋಹೆ,
ಕಪಿಲಸಿದ್ಧಮಲ್ಲಿಕಾರ್ಜುನಾ ನಿನಗಿದು ಸಹಜ.
Transliteration Vr̥kṣachāyeyallihaṅge nīnu,
sakalarige svātantrya padavanīve, ninagilla.
Nīnu niṣkaladalli nirṇayisi
sakaladalli svātantrisi ippe.
Ānandavemba gatiyalli,
sānandavemba tāḷaviḍidu āḍalāgi,
koṭṭenemba padava avarolladiddaḍe
nīne occata hōhe,
kapilasid'dhamallikārjunā ninagidu sahaja.