Index   ವಚನ - 1084    Search  
 
ಸುಖಮುಖವಾಗಿ ಸುಖಾಸೀನವಾಗಿ ಆಧಾರ ಜ್ವಾಲೆಯನೆತ್ತಿ, ಕುಂಡಲಿಯ ಭುಜಗನ ಹೊಡೆದೆಬ್ಬಿಸಿ ದಂಡನಾಳದ ತುದಿಯ ಮುಂದಣ ಮುಂಬಾಗಿಲ ಕಳೆದು ನೋಡಲು ತ್ರಿಕೂಟಗಿರಿಯಾಗ್ರದಲ್ಲಿ ಮೇಲೆ ಸಿಂಹಾಸನವಿಕ್ಕಿ ನಿಸ್ಸೀಮ ಕುಳ್ಳಿರ್ದನಯ್ಯಾ ನಮ್ಮ ನಿಜಗುರು ಸ್ವತಂತ್ರ ಕಪಿಲಸಿದ್ಧಮಲ್ಲಿಕಾರ್ಜುನ ದೇವರದೇವನು.