Index   ವಚನ - 1106    Search  
 
ಸ್ವಸ್ಥಿರವೆಂಬ ಭೂಮಿಯಲ್ಲಿ ಸ್ತಂಭಂಗಳು ಮೂರಾಗಿ, ಫಲಂಗಳಾರಾದವು. ಆ ಫಲ ಮೀರಿತ್ತು, ಮೇಲಣ ಮೂವತ್ತಾರ ಮೀರಿ, ಅವ್ವೆಗೆ ಯೋಗ್ಯವಾಗಿ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ ತತ್ತ್ವವಿದೆಂದರಿತು ತತ್ತ್ವಮಸಿಯಾದಳವ್ವೆ.