ಸ್ವಾಮಿ ಸ್ವಾಮಿ ಅಂಗ ಲಿಂಗ ಸಮರಸವ
ಅರಿದರಿದು ಅರಿಯದಂತಿರ್ಪೆ ನಾನು;
ಕರುಣಿಸಯ್ಯಾ, ಅಯ್ಯಾ ದಮ್ಮಯ್ಯಾ.
ನೀ ಲಿಂಗಾಂಗ ಸಮರಸದ
ವಿಚಾರನಿಮಿತ್ತೆನ್ನ ತಂದುದ ಬಲ್ಲೆ.
ಲಿಂಗಾಂಗ ಸಮರಸ ನಿಮಿತ್ತ ತ್ರಿಕರಣಶುದ್ಧವಾಗಿ
ನಾ ಬಂದುದ ಬಲ್ಲೆ.
ಎನ್ನ ಬೋಧಿಸಿ ಭವಕ್ಕೆ ಬಾರದನ ಮಾಡಯ್ಯ,
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Svāmi svāmi aṅga liṅga samarasava
aridaridu ariyadantirpe nānu;
karuṇisayyā, ayyā dam'mayyā.
Nī liṅgāṅga samarasada
vicāranimittenna tanduda balle.
Liṅgāṅga samarasa nimitta trikaraṇaśud'dhavāgi
nā banduda balle.
Enna bōdhisi bhavakke bāradana māḍayya,
kapilasid'dhamallikārjunā.