ಸ್ವಾಮಿ ಸ್ವಾಮಿ, ಗುರುಕರಜಾತ
ಗುರುಕರಜಾತನಪ್ಪುದೆಂದು ನುಡಿವರಯ್ಯಾ,
ಅನಾದಿ ಹರ ಪುರಾತನ ಗಣಂಗಳು.
ಗುರುವೆಂದಡೇನು, ಕರವೆಂದಡೇನು.
ಜಾತವೆಂದಡೇನು?
ಇದನರುಹಿ ಪಾವನ ಮಾಡಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Svāmi svāmi, gurukarajāta
gurukarajātanappudendu nuḍivarayyā,
anādi hara purātana gaṇaṅgaḷu.
Guruvendaḍēnu, karavendaḍēnu.
Jātavendaḍēnu?
Idanaruhi pāvana māḍayya,
kapilasid'dhamallikārjunā.