Index   ವಚನ - 1114    Search  
 
ಹರಬಸವಾಯ ನಮಃ ಎಂದು ಪಾಪದೂರನಾದೆ. `ಗುರುಬಸವಾಯ ನಮಃ' ಎಂದು ಭವದೂರನಾದೆ. `ಲಿಂಗಬಸವಾಯ ನಮಃ' ಎಂದು ಲಿಂಗಾಂಕಿತನಾದೆ. `ಜಂಗಮ ಬಸವಾಯ ನಮಃ' ಎಂದು ನಿಮ್ಮ ಪಾದಕಮಲದಲ್ಲಿ ಭ್ರಮರನಾದೆ. ಏಳಾ ಸಂಗನ ಬಸವ ಗುರು ಕಪಿಲಸಿದ್ಧಮಲ್ಲಿಕಾರ್ಜುನಸ್ವಾಮಿಯೆ.