ಹರಿ ಬ್ರಹ್ಮ ಧರೆ ಆಕಾಶವಿಲ್ಲದ ಭಸ್ಮಕ್ಕೆ
ಸ್ಥಲವದು ಆದಿ ನೋಡಯ್ಯಾ.
ಭಸ್ಮವನೆ ಮಸುಳಿಸಿ, ಲೋಕಂಗಳನೆ ಹಡೆದು,
ಸಕಲ ಜೀವರನಿಂತು ಮಾಡಿದರೊಳರೆ?
ನಿನ್ನಿಚ್ಛೆ ನಿನಗೆ: ಸ್ವಯಂಭು ನೀನೆಯಾಗಿರ್ದೆಯಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ.
Art
Manuscript
Music
Courtesy:
Transliteration
Hari brahma dhare ākāśavillada bhasmakke
sthalavadu ādi nōḍayya.
Bhasmavane masuḷisi, lōkaṅgaḷane haḍedu,
sakala jīvaranintu māḍidaroḷare?
Ninnicche ninage: Svayambhu nīneyāgirdeyayya,
kapilasid'dhamallināthayya.