ವಚನ - 1120     
 
ಹರಿಯಾಣದೊಳಗಣ ಓಗರವ ಹರಿಯವರು ಹರಿಹರಿದುಂಡರಯ್ಯಾ. ಪರ ವಧು ಬಂದು ಬೆರಸಲು ಆ ಹರಿ ಪರಹರಿಯಾದ. ಉಣಬಂದ ಹರಿಯ ಶಿರವ ಮೆಟ್ಟಿ ನಿಂದಳು ನಿಮ್ಮ ಹೆಣ್ಣು. ಇದ ಕಂಡು ನಾ ಬೆರಗಾದೆನಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.