Index   ವಚನ - 1152    Search  
 
ಹೆಸರಿಡಬಾರದ ಸುಖದ ಸಾಯುಜ್ಯದಲ್ಲಿ ಅರ್ಪಿತಾವಧಾನ ಮುಖಂಗಳ ಭೇದಂಗಳ ಭೇದಿಸುವೆ. ಇಡಾ ಪಿಂಗಳಾ ಸುಷುಮ್ನಾನಾಳಂಗಳ ಭೇದಂಗಳ ಭೇದಿಸುವೆ, `ಏಕ ಏವ ರುದ್ರೋನ ದ್ವಿತೀಯಃ' ಎಂಬ ಭೇದವ ಭೇದಿಸುವೆ, ನಿತ್ಯಪ್ರಸಾದದಲ್ಲಿ ನಿಪುಣನಪ್ಪೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡುವೆ.