ವಚನ - 1185     
 
ಸಕಲ ನಿಃಕಲದಲ್ಲಿ , ಬ್ರಹ್ಮಾಂಡತತ್ತ್ವದಲ್ಲಿ ಕರ್ಮದ ಸೊಮ್ಮಿನ ಸೀಮೆಯನತಿಗಳೆದು ಅದ ಲಿಂಗವೆಂದು ತೋರಬಲ್ಲಾತ ಗುರು. ತನುಗುಣ ಸಂಬಂಧವ ತಾನೆಂದು ತೋರಲೀಯದೆ, ನಿಶ್ಚಯವ ಮಾಡಿ ತಾತ್ಪರ್ಯಕಳೆಯನಿರಿಸಿ, ಸಕಲದಲ್ಲಿ ನಿಃಕಲದಲ್ಲಿ , ರೂಪಿನಲ್ಲಿ ಅರೂಪಿನಲ್ಲಿ , ಭಾವದಲ್ಲಿ ನಿರ್ಭಾವದಲ್ಲಿ ಅವೆ ಅವಾಗಿ ತೋರಬಲ್ಲಾತ ಗುರು . ಈ ಪರಿಯಲ್ಲಿ ತೋರಿ ಎನ್ನ ಭವವ ತಪ್ಪಿಸಿದ ಕಪಿಲಸಿದ್ಧಮಲ್ಲಕಾರ್ಜುನಯ್ಯನೆಂಬ ಪರಮಗುರು.