ವಚನ - 1186     
 
ಶ್ರೀಗುರುವೆ ದಿವ್ಯಮಹಾಮುನಿಯೆ, ಶ್ರೀಗುರುವೆ ಲೋಕವೀರೇಳ ಹೆತ್ತ ಆನಂದಮಯ ಚಿನ್ಮಯ ಮಹಾಗುರುವೆ, ದೇವಾ , ಶಿಷ್ಯಕಾರಣ ನೀವು ಪರಶಿವಮೂರ್ತಿಯಾದಿರಯ್ಯಾ, ನಿತ್ಯಪ್ರಸಾದದಲ್ಲಿ ಮುಕ್ತನನು ಮಾಡಿದ ನಿತ್ಯ ಜ್ಯೋತಿರ್ಮಯ ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಾ.