ನಾಗೇಂದ್ರನ ವಿಷವನು, ಬ್ರಹ್ಮನ ಕಪಾಲವನು
ಮತ್ತೊಬ್ಬರಿಗೆ ಹಿಡಿದು ತೀರುವುದೆ, ಎಲೆ ಅಯ್ಯಾ ?
ಎತ್ತಿದಡೆ ಮೇಲೇಳುಲೋಕವನುರುಹುವುದು;
ಇಳುಹಿದಡೆ ಕೆಳಗೇಳುಲೋಕವನುರುಹುವುದು;
ಇವನೆತ್ತದೆ ಇಳುಹದೆ ಕೊಂಡಾಡುವ ದೇವ
ನಮ್ಮ ಕಪಿಲಸಿದ್ಧಮಲ್ಲಿನಾಥಯ್ಯನೆ!
Transliteration Nāgēndrana viṣavanu, brahmana kapālavanu
mattobbarige hiḍidu tīruvude, ele ayyā?
Ettidaḍe mēlēḷulōkavanuruhuvudu;
iḷuhidaḍe keḷagēḷulōkavanuruhuvudu;
ivanettade iḷuhade koṇḍāḍuva dēva
nam'ma kapilasid'dhamallināthayyane!