ವೇಷದಲ್ಲಿ ಭಕ್ತನಾದಡೇನು,
ವೇಷದಲ್ಲಿ ಮಹೇಶನಾದಡೇನು,
ಗುಣವಿಲ್ಲದನ್ನಕರ ?
ಕ್ಷೀರಕ್ಕೂ ತಕ್ರಕ್ಕೂ ಭೇದವೇನುಂಟು ?
ರುಚಿಯಿಂದಲ್ಲದೆ ರೂಪದಿಂದವೆ ?
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Vēṣadalli bhaktanādanu,
vēṣadalli mahēśanādaḍēnu,
guṇavilladannakara?
Kṣīrakkū takrakkū bhēdavēnuṇṭu?
Ruciyindallade rūpadindave?
Kapilasid'dhamallikārjunā.