ವಚನ - 1219     
 
ನಿರ್ವಿಷಯನಾಗಬೇಕೆಂದು ಹೇಳುವರಲ್ಲದೆ, ಆದವರನೊಬ್ಬರನೂ ಕಾಣೆ ನೋಡಯ್ಯಾ. ಆಗುವುದೆ, ಆಗುವುದೆ ಮಾಯಾಂಶಿಕಂಗೆ? ಆಗುವುದು ನಿನ್ನಂಶಿಕಂಗಲ್ಲದೆ ಇನ್ನಾರಿಗಯ್ಯಾ, ಕಪಿಲಸಿದ್ಧಮಲ್ಲಿನಾಥಾ.