ಬಡವ ನಿಧಾನವ ಕಂಡಂತೆ,
ಹಾರುವ ಮಾಳವ ಕಂಡಂತೆ,
ಶಿಶು ತನ್ನ ತಾಯ ಕಂಡಂತೆ,
ವೀರ ತಾನು ಪರಸೇನೆಯ ಕಂಡಂತೆ,
[ಆನು] ಚೆನ್ನಬಸವಣ್ಣನ ಪಾದವ
ನೋಡಿ ಹರುಷಿತನಾದೆ,
ಮಾಡಿ ಮಾಡಿಸಾ ಉಪದೇಶವ,
ನೋಡಿ ನೋಡಿಸಾ ಮಹಿಮೆಯ.
ಇದರದ್ಭುತವೇಕೆಂದಡೆ, ಕೊಡಿಸಾ
ಎನ್ನ ಕೈಯಲ್ಲಿ ಇಷ್ಟಲಿಂಗವ,
ಪರಮಪ್ರಭುವೆ, ಕಪಿಲಸಿದ್ಧಮಲ್ಲಿಕಾರ್ಜುನಾ.