ವಚನ - 1274     
 
ಶುದ್ಧವನರಿದೆ ಚೆನ್ನಬಸವಣ್ಣಾ ನಿಮ್ಮಿಂದೆ; ಸಿದ್ಧವನರಿದೆ ಚೆನ್ನಬಸವಣ್ಣಾ ನಿಮ್ಮಿಂದೆ; ಪ್ರಸಿದ್ಧವನರಿದೆ ಚೆನ್ನಬಸವಣ್ಣಾ ನಿಮ್ಮಿಂದೆ; ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಚೆನ್ನಬಸವಣ್ಣ ಗುರುವಾಗಿ ಬಂದು ಎನ್ನ ಜನ್ಮಕರ್ಮವ ನಿವೃತ್ತಿ ಮಾಡಿದನಯ್ಯಾ.