ಕರಂಗಳೆ ಮನೆಯಾಗಿ, ಕರಣಂಗಳೆ ಕರಂಗಳಾಗಿ,
ಅರ್ಪಿಸುವ ಭೇದವನಾರು ಬಲ್ಲರಯ್ಯಾ, ಚೆನ್ನಬಸವಣ್ಣನಲ್ಲದೆ?
ತನು ಪ್ರಾಣ ಇಷ್ಟಲಿಂಗ ಸಂಬಂಧಿಯಾಗಿ,
ಇಂದ್ರಿಯಂಗಳೈದು ಮುಖಂಗಳಾಗಿ,
ಅರ್ಪಿಸುವ ಭೇದವನಾರು ಬಲ್ಲರಯ್ಯಾ ಚೆನ್ನಬಸವಣ್ಣನಲ್ಲದೆ?
ಆನಂದಸ್ಥಾನದಲ್ಲಿ ಅನಿಮಿಷಾಕ್ಷರದ ಸಂಯೋಗ ಅರ್ಪಣದ ಭೇದವ
ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಚೆನ್ನಬಸವಣ್ಣ ಬಲ್ಲ ;
ಮಿಕ್ಕಿನವರಿಗೆ ಸಾಮಾನ್ಯವೆಂಬೆನೆಂಬೆ !
Art
Manuscript
Music
Courtesy:
Transliteration
Karaṅgaḷe maneyāgi, karaṇaṅgaḷe karaṅgaḷāgi,
arpisuva bhēdavanāru ballarayya, cennabasavaṇṇanallade?
Tanu prāṇa iṣṭaliṅga sambandhiyāgi,
indriyaṅgaḷaidu mukhaṅgaḷāgi,
arpisuva bhēdavanāru ballarayya cennabasavaṇṇanallade?
Ānandasthānadalli animiṣākṣarada sanyōga arpaṇada bhēdava
kapilasid'dhamallikārjunanalli cennabasavaṇṇa balla;
mikkinavarige sāmān'yavembenembe!