ಐದು ಬ್ರಹ್ಮರಲ್ಲಿ ಅಯ್ಯಾ,
ನೀನು ಅತಿಶಯ ಜ್ಯೋತಿರ್ಮಯನು.
ಆನಂದಸ್ಥಾನದಲ್ಲಿ ಅಯ್ಯಾ,
ನೀನು ಅತಿಶಯ ನಿತ್ಯಮಯನು.
ಬಾಹ್ಯಾಭ್ಯಂತರದಲ್ಲಿ ಪರಿಪೂರ್ಣನು.
ನಿನ್ನಾಧಿಕ್ಯವನರಿಯಲ್ಕೆ ನಿಗಮಕ್ಕಭೇದ್ಯನು.
ಗುರುವಿನ ಕರುಣದಿಂದ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದೆ ಶಿವನೇ,
ಮಹಾಲಿಂಗ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Aidu brahmaralli ayyā,
nīnu atiśaya jyōtirmayanu.
Ānandasthānadalli ayya,
nīnu atiśaya nityamayanu.
Bāhyābhyantaradalli paripūrṇanu.
Ninnādhikyavanariyalke nigamakkabhēdyanu.
Guruvina karuṇadinda
enna karasthalakke bandu cuḷukāde śivanē,
mahāliṅga kapilasid'dhamallikārjunā.