•  
  •  
  •  
  •  
Index   ವಚನ - 1308    Search  
 
ಅಹುದಹುದು ಮತ್ತೇನು? ಮರಹಿಂಗೆ ಹಿರಿದು ಕಿರಿದುಂಟಲ್ಲದೆ, ಅರುಹಿಂಗೆ ಹಿರಿದು ಕಿರಿದುಂಟೆ? ಹೇಳಯ್ಯಾ. ಸಾವಂಗೆ ಭಯವುಂಟಲ್ಲದೆ ಅಜಾತಂಗೆ ಭಯವುಂಟೆ? ಹೇಳಯ್ಯಾ. ಕಪಿಲಸಿದ್ಧಮಲ್ಲಿನಾಥನಲ್ಲಿ, ಮಹಾದೇವಿಯಕ್ಕನ ನಿಲುವಿಂಗೆ ಶರಣೆಂದು ಶುದ್ಧನಾದೆ ಕಾಣಾ, ಚೆನ್ನಬಸವಣ್ಣಾ.
Transliteration Ahudahudu mattēnu? Marahiṅge hiridu kiriduṇṭallade, aruhiṅge hiridu kiriduṇṭe? Hēḷayya. Sāvaṅge bhayavuṇṭallade ajātaṅge bhayavuṇṭe? Hēḷayya. Kapilasid'dhamallināthanalli, mahādēviyakkana niluviṅge śaraṇendu śud'dhanāde kāṇā, cennabasavaṇṇā.