ಅಯ್ಯಾ, ನಿಮ್ಮ ಮೂರ್ತಿಯ
ನೋಡಿಹೆನೆಂದಡೆ ದೃಷ್ಟಿಯಾನವು.
ನಿಮ್ಮ ತೇಜವನಾರು ನೋಡಲಮ್ಮರಯ್ಯಾ
ನಿಮ್ಮ ತೇಜವನೊಬ್ಬರಿಗೆಯೂ ಉಪಮಿಸಬಾರದು.
ನೀವು ಮುನಿದು ನೊಸಲ ಕಣ್ಣ ತೆಗೆದಡೆ,
ಅದಕ್ಕೆ ಇದಿರಪ್ಪರಿನ್ನಾರು ಹೇಳಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ,
ನಿಮ್ಮ ತೇಜವು ಮೂರುಲೋಕವ ನುಂಗಿದಡೆ
ನೋಡಿ ಕಣ್ಣ ಮುಚ್ಚುತ್ತಿರ್ದೆನು.