Index   ವಚನ - 1317    Search  
 
ಅಳವಟ್ಟಿತ್ತಳವಟ್ಟಿತ್ತಯ್ಯಾ, ನಿಮಗಲ್ಲದಾರಿಂಗೆ [ಜ್ಞಾನ]? ಅಳವಟ್ಟಿತ್ತಳವಟ್ಟಿತ್ತಯ್ಯಾ, ನಿಮಗಲ್ಲದಾರಿಂಗೆ [ವೈರಾಗ್ಯ]? ಅಳವಟ್ಟ ಬಳಿಕ ಕಳವಳಗೊಂಡಳು [ಮಾಯೆ], ಕಪಿಲಸಿದ್ಧಮಲ್ಲಿನಾಥಾ.