•  
  •  
  •  
  •  
Index   ವಚನ - 1331    Search  
 
ಎನ್ನ ಒಳಗನೊತ್ತಿ ನೋಡುವಿರಿ ; ಎನ್ನಲೇನುಂಟಯ್ಯಾ? ನುಡಿಯಿಲ್ಲದಭವ ನೀನು, ನುಡಿಗಲಿತೆನೆಂದಡೆ ನಿಮ್ಮನೊಡಂಬಡಿಸಲಾನು ಸಮರ್ಥನೆ? ಅನಂತ ವೇದಂಗಳೆಲ್ಲವು ನಿಮ್ಮ ಮುಂದೆ ಉಸುರಿಕ್ಕಲಮ್ಮದೆ ಮೂಗರಾಗಿದ್ದವು. ನಿಮಗಾನಿದಿರುತ್ತರವ ಕೊಟ್ಟು ಕೆಟ್ಟ ಕೇಡಿಂಗೆ ಏನೆಂಬೆನೆಲೆ ಅಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನಾ, ನಾನುಭಯಭ್ರಷ್ಟನೆಂಬುದ ನೀವೆ ಬಲ್ಲಿರಿ.
Transliteration Enna oḷaganotti nōḍuviri; ennalēnuṇṭayyā? Nuḍiyilladabhava nīnu, nuḍigalitenendaḍe nim'manoḍambaḍisalanu samarthane? Ananta vēdaṅgaḷellavu nim'ma munde usurikkalam'made mūgarāgiddaru. Nimagānidiruttarava koṭṭu keṭṭa kēḍiṅge ēnembenele ayyā? Kapilasid'dhamallikārjunā, nānubhayabhraṣṭanembuda nīve balliri.