ಅಯ್ಯಾ, ನಿಮ್ಮ ಕಂಡ ಕಾಣಿಕೆಯಲ್ಲಿ ನಂಬಿ ನಚ್ಚಿ.
ಶರಣುಹೊಗಲರಿಯದೆ ಕೆಮ್ಮನೆ ಕೆಟ್ಟೆ;
ಅಹಂಕಾರವ ಹೊತ್ತುಕೊಂಡು ಕೆಟ್ಟೆ ನೋಡಯ್ಯಾ.
ಕೆಡಿಸಿ, ಮರುಗಿ, ಮರಸಿಹೆನೆಂಬ ಮರುಳು ನಾನಯ್ಯಾ.
ಕಪಿಲಸಿದ್ಧಮಲ್ಲಿನಾಥಯ್ಯಾ,
ಹಾಲಲದ್ದು, ನೀರಲದ್ದು ; ನೀನೇ ಗತಿ ಮತಿ!
Art
Manuscript
Music
Courtesy:
Transliteration
Ayya, nim'ma kaṇḍa kāṇikeyalli nambi nacci.
Śaraṇuhogalariyade kem'mane keṭṭe;
ahaṅkārava hottukoṇḍu keṭṭe nōḍayya.
Keḍisi, marugi, marasihenemba maruḷu nānayyā.
Kapilasid'dhamallināthayya,
hālaladdu, nīraladdu; nīnē gati mati!