•  
  •  
  •  
  •  
Index   ವಚನ - 1333    Search  
 
ಎನ್ನ ಭರಭಾರ ನಿಮ್ಮದಯ್ಯಾ, ಎನ್ನ ಹಾನಿವೃದ್ಧಿ ನಿಮ್ಮದಯ್ಯಾ, ಎನ್ನ ಕರಕರ ಕಾಡದಿರು ತಂದೆ! ನಿನ್ನ ಕಾಟ ಎನ್ನ ಪ್ರಾಣದೋಟ! ಕಪಿಲಸಿದ್ಧಮಲ್ಲಿನಾಥಾ, ಕೊಲ್ಲು, ಕಾಯಿ : ನಿಮ್ಮ ಧರ್ಮದವ ನಾನು.
Transliteration Enna bharabhāra nim'madayyā, enna hānivr̥d'dhi nim'madayyā, enna karakara kāḍadiru tande! Ninna kāṭa enna prāṇadōṭa! Kapilasid'dhamallinātha, kollu, kāyi: Nim'ma dharmadava nānu.