ಎನ್ನ ತನು ಕರಗಿ, ಎನ್ನ ಮನ ಕರಗಿ ಕೊರಗಿದ
ದುಃಖವಿದಾರದಯ್ಯಾ?
`ಅಯ್ಯಾ ಅಯ್ಯಾ' ಎಂದು ಅಳುವ ಅಕ್ಕೆ ಇದಾರದಯ್ಯಾ?
ಮರಹೆಂಬ ಕೂರಸಿಗೆ ಗುರಿಮಾಡಿದವರಾರಯ್ಯಾ?
ಹಾ! ಹಾ! ಎಂಬ ಧ್ವನಿಯ ಕೇಳಲಾರದೆ,
ಕಂಡು ಕರುಣದಿಂದ ಶಿರವ ಹಿಡಿದೆತ್ತಿ,
ಎನ್ನ ಕಣ್ಣ ನೀರ ತೊಡೆದನು
ಕಪಿಲಸಿದ್ಧಮಲ್ಲಿನಾಥಯ್ಯನು.
Art
Manuscript
Music
Courtesy:
Transliteration
Enna tanu karagi, enna mana karagi koragida
upayuktavidāradayyā?
`Ayyā ayyā’ endu aḷuva akke idāradayyā?
Marahemba kūrasige gurimāḍidavarayyā?
Hā! Hā! Emba dhvaniya kēḷalārade,
kaṇḍu karuṇadinda śirava hiḍidetti,
enna kaṇṇa nīra toḍedanu
kapilasid'dhamallināthayyanu.