•  
  •  
  •  
  •  
Index   ವಚನ - 1349    Search  
 
ಬಣ್ಣವಿಲ್ಲದೆ ಚಿನ್ನ ನಾಮಕ್ಕರ್ಹನಾದ ಪರಿ ಇನ್ನೆಂತಯ್ಯಾ. ಹೂವೊಣಗಿ ವಾಸನೆ ಮುಡಿದ ಠಾವಿನಲ್ಲಿ ವಾಸನೆ ನಿಂದುದಿಲ್ಲವೆ? ಅಯ್ಯಾ. ಕ್ರೀಶುದ್ಧವಾದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವು ಭಾವಶುದ್ಧವಾಗಿರ್ಪನು.
Transliteration Baṇṇavillade cinna nāmakar'hanāda pari innentayyā. Hūvoṇagi vāsane muḍida ṭhāvinalli vāsane nindudillave? Ayyā. Kr̥śud'dhavādadalli kapilasid'dhamallikārjunaliṅgavu bhāvaśud'dhavāgirpanu.