•  
  •  
  •  
  •  
Index   ವಚನ - 1367    Search  
 
ಕೆರೆ ತೊರೆ ದೇಗುಲಂಗಳ ಕಡೆಯಿಂದ ನಿಮ್ಮ ಕಂಡೆ; ಎಡಹುವ ಕಲ್ಲ ತೆಗೆವ ಮರೆಯಲ್ಲಿ ನಿಧಾನವ ಕಂಡಂತೆ. ಎನ್ನ ಮರವೆಯ ತಮದ ಅದ್ರಿಗೆ ದಿನಮಣಿ ಜನಿಸಿದಂತೆ. ಕಪಿಲಸಿದ್ಧಮಲ್ಲಿಕಾರ್ಜುನಲಿಂಗವೆಂಬ ಭ್ರಾಂತು ಸ್ವಯವಾಯಿತ್ತು. ಪ್ರಭುದೇವರ ಕಾರುಣ್ಯದಿಂದ.
Transliteration Kere tore dēgulagaḷa kaḍeyinda nim'ma kaṇḍe; eḍahuva kalla tegeva mareyalli nidhānava kaṇḍante. Enna maraveya tamada adrige dinamaṇi janisidante. Kapilasid'dhamallikārjunaliṅgavemba bhrāntu svayavāyittu. Prabhudēvara kāruṇyadinda.