Index   ವಚನ - 1396    Search  
 
ತಿಳಿದು ತಿಳಿದು ಸಾಕ್ಷಿಯಾದಡೆ, ತಾ ಉಳಿಯಲಿಲ್ಲ ನೋಡಯ್ಯಾ.ಉಳಿಯಲಿಲ್ಲ ಉಳಿಯಲಿಲ್ಲವೆಂದಡೆ, ಈ ಶಬ್ದವೆಲ್ಲಿಹದಯ್ಯಾ? ವಿಚಾರದಿಂದ ಒಳಗಾಗುವುದು, ಅವಿವೇಕದಿಂದ ದೂರಾಗುವುದು. ಸರ್ವ ಜಗದ್ರೂಪು ನಿಮ್ಮದೆಂದು ನಂಬಿ, ಸಕಲಲೋಕಾಲೋಕಕ್ಕೆ ಕೈಮುಗಿದೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.