ದೇಹವ ನಿರ್ದೇಹಿಗೊಪ್ಪಿಸಿದಲ್ಲಿ ದೇಹ ನಿರ್ದೇಹವಾಗಿತ್ತು.
ಮನವ ಲಿಂಗಕ್ಕರ್ಪಿಸಿದಲ್ಲಿ ಮನ ಲಿಂಗವಾಗಿ ಮನ
ಲೀಯವಾಯಿತ್ತು.
ಭಾವವ ತೃಪ್ತಿಗರ್ಪಿಸಿ ಭಾವ ಬಯಲಾಯಿತ್ತಯ್ಯಾ.
ದೇಹ ಮನ ಭಾವವಳಿದಲ್ಲಿ ಕಾರಣಕಾಯ ಅಕಾಯವಾಯಿತ್ತು.
ಎನ್ನ ದೇಹದ ಸುಖವ ಲಿಂಗ ಭೋಗಿಸುವುದಾಗಿ,
ಶರಣಸತಿ ಲಿಂಗಪತಿ ಎಂಬ ಭಾವ ಅಳವಟ್ಟಿತ್ತಯ್ಯಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Dēhava nirdēhigoppisidaḷu dēha nirdēhavāgittu.
Manava liṅgakkarpisiyalli mana liṅgavāgi mana
līyavāyittu.
Bhāvava tr̥ptigarpisi bhāva bayalāyittayyā।
dēha mana bhāvadalli kāraṇakāya akāyavāyittu.
Enna dēhada sukhava liṅga bhōgisuvudāgi,
śaraṇasati liṅgapati emba bhāva aḷavaṭṭittayyā,
ele kapilasid'dhamallikārjunā.