ವಚನ - 1447     
 
ಮಾಡದೆ ಮೋಕ್ಷವ ಹಡೆದು ಹೋದರೆಂಬ ವಾರ್ತೆಯ ಕೇಳಿಹಿರೇನಯ್ಯಾ? ಇಲ್ಲ ಇಲ್ಲವು, ಮಾಡಿದಡೆ ತಪ್ಪದು; ಮಾಡಲೊಲ್ಲದೆ ಹೋದಡೆ ಬರುವುದು ದೂರಾಗದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.