Index   ವಚನ - 1495    Search  
 
ಮೂರ್ಖತ್ವೇನ ಸ್ವಕೀಯಾನಿ ಕರ್ಮಾಣಿ ಚ ದಿನೇ ದಿನೇ | ಯಃ ಕರೋತಿ ಸ ಮೂಢಸ್ತು ಶತಜನ್ಮವಿಮೋಚಕಃ || ಎಂಬವನು ಕರ್ಮಿಯಯ್ಯಾ, ``ಜಗತ್ಸತ್ಯಂ ಮತ್ವಾ ಜಗತಿ ನಿರತಃ ಕರ್ಮಕುಶಲಃ| ತೃತೀಯೇನ ಪ್ರಾಪ್ತಿಃ ಪರಮ ಸುಪದಂ ಶಾಂಕರಿ ಶಿವೇ||'' "ಪ್ರಪಂಚಂ ಸ್ವಪ್ನವನ್ಮತ್ವಾ ಧ್ಯಾನಕರ್ಮಪರಾಯಣಃ| ದ್ವಿಜನ್ಮತಾಂ ಸ ಮೋಕ್ಷಂ ಚ ಪ್ರಯಾತಿ ಗಿರಿನಂದನೆ||'' ಎಂಬವನು ಅಭ್ಯಾಸಿ ಕಂಡಯ್ಯಾ. "ವ್ಯವಹಾರಾನ್ಸಮಸ್ತಾಂಶ್ಚ ಉಪೇಕ್ಷ್ಯ ಪರಮೇಶ್ವರಿ| ವಿವೇಕತತ್ತ್ವರೋಭೂತ್ವಾ ಏಕಜನ್ಮವಿಮೋಚಕಃ||'' ಎಂಬವನು ಅನುಭಾವಿ ನೋಡಯ್ಯಾ. ``ಅದೃಷ್ಟ್ಯಾ ವಿಶ್ವವಿಕೃತಿಂ ಸ್ವಾತ್ಮಜ್ಞಾನೇನ ಯೋ ನರಃ| ಭಾತಿ ತಸ್ಯ ಮಹಾದೇವಿ ವಿದೇಹಂ ವಪುರೀರಿತಂ||'' ಎಂಬುವನು ಆರೂಢ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.