ವಚನ - 1496     
 
ಒಂದು ಮಣಿಪರೀಕ್ಷೆಗೆ ಮೂವತ್ತಾರು ಮಣಿ ನೋಡಿದೆಯಯ್ಯಾ. ಮೂವತ್ತಾರು ಮಣಿ ಕೂಡಿ ಒಂದು ಮಣಿ ಪರೀಕ್ಷಿಸಿದಡೆ, ಮೂವತ್ತಾರು ಮಣಿ ಇಲ್ಲ ನೋಡಯ್ಯಾ. ಪರೀಕ್ಷೆಯಾಗದಿರೆ, ಆ ಮಣಿಗಳು ಮಣಿಮಣಿಗೆ ಸೇರ್ಪಡೆಯಾದವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.