Index   ವಚನ - 1518    Search  
 
ಕಟ್ಟಿದ ಲಿಂಗವ ಬಿಟ್ಟು, ನಟ್ಟಿದ ಲಿಂಗವನಟ್ಟಿ, ಮೊಟ್ಟೆ ಮೊಟ್ಟೆ ತಾವರೆ ಮೊದಲಾದ ಪುಷ್ಪವ ಧರಿಸುವಾತನಿರವು ಚಾಂಡಾಲನ ಇರವು ನೋಡಾ; ಆತನ ಸಂಗ ಮಾದಿಗರ ಸಂಗ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.