Index   ವಚನ - 1536    Search  
 
ಭಕ್ತಿಯ ಮಾಡುವುದು ಮಲತ್ರಯದೊಳಗಲ್ಲ ಮಹೇಶನು. ಮುಕ್ತಿಯ ಪಡೆವಡೆ ಜಡಜೀವಿಯಲ್ಲ ನೋಡಾ ಭಕ್ತನು. ಭಕ್ತನಿಗೆ ಭಕ್ತಿಮುಕ್ತಿ ಎಂಬ ಯುಕ್ತಿ ಸೊಗಸದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.