ಚರ್ಮವ ಧರಿಸಿಪ್ಪನೆಂಬರು, ಅದು ಪುಸಿಯೇನಯ್ಯಾ?
ಪಂಚ ದೇಹಾಂತರ್ಯಾಮಿಯೆಂಬುದು ಶ್ರುತಿಸಿದ್ಧ.
`ಕೃತಿವಾಸನೇ ನಮಃ, ಜಗದಂತರ್ಯಾಮಿನೇ ನಮಃ'
ಬ್ರಹ್ಮಕಪಾಲವ ಧರಿಸಿ ತೃಪ್ತಿಯಪ್ಪನೆಂಬರು,
ಅದು ಪುಸಿಯೇನಯ್ಯಾ? ಸರ್ವಮುಖದಲ್ಲಿ ಭೋಜಿಸುವುದಾಗಿ.
``ಮಹಾದೇವೀ ಚರಣಂ ಚ ಮುಖೇನಾಸ್ವಾದನಂ ಚಿರಂ|
ಕರೋಮಿ ಪ್ರಮುದಾ ಲೇಹ್ಯಂ ಚೋಹ್ಯಂ ಭಿಕ್ಷಾದಿಕಂ ಮಹತ್||"
ಎಂಬುದು ಆಗಮಸಿದ್ಧ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ
Art
Manuscript
Music
Courtesy:
Transliteration
Carmava dharisippanembaru, adu pusiyēnayyā?
Pan̄ca dēhāntaryāmiyembudu śrutisid'dha.
`Kr̥tivāsanē namaḥ, jagadantaryāminē namaḥ'
brahmakapālava dharisi tr̥ptiyappanembaru,
adu pusiyēnayyā? Sarvamukhadalli bhōjisuvudāgi.
``Mahādēvī caraṇaṁ ca mukhēnāsvādanaṁ ciraṁ|
karōmi pramudā lēhyaṁ cōhyaṁ bhikṣādikaṁ mahat||
embudu āgamasid'dha nōḍā,
kapilasid'dhamallikārjunā