ವಚನ - 1549     
 
ಕಲ್ಮುಡಿಗನ ಕೈಯಲ್ಲಿ ಕಲ್ಲುಳಿ ಕೊಟ್ಟಡೆ, ಕೊಟ್ಟಂತಲ್ಲದೆ ಕಲ್ಲು ರೂಪಾಗಿ ಬಾರದಯ್ಯಾ. ಆದ್ಯರ ವಚನ ಅವಿದ್ಯಾವಂತನ ಜಿಹ್ವೆಯಲ್ಲಿದ್ದಡೆ, ಇದ್ದಂತಲ್ಲದೆ ವಿದ್ಯಾಮಯಕೀರ್ತಿಯಾಗನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.