ವಚನ - 1550     
 
ಕುಳಿರ್ಗಾಳಿಯೊಳು ಕುಳಿತಂತಲ್ಲದೆ ಉದರದ ಕುಳಿ ತಂಪಾಗುವುದೆ ಅಯ್ಯಾ? ಕುಳಿರ್ವಶವಿದ್ಯೆಯ ನೋಡಿದಂತಲ್ಲದೆ, ಭವದ ಕುಳಿ ತಪ್ಪುವದೆ ಅಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.