ಅಂಗೈಯೊಳಗಣ ಲಿಂಗಮೂರ್ತಿಯ ಕಂಗಳಲ್ಲಿಂಗಗೊಟ್ಟಡೆ,
ತಿಂಗಳ ಸೂಡನಾದೆ ನೋಡಾ ಅಯ್ಯಾ.
ಮಂಗಳಮೂರ್ತಿ ಗಂಗಾಜೂಟಾಂಗಮಯ
ಕಪಿಲಸಿದ್ಧಮಲ್ಲಿಕಾರ್ಜುನಲಿಂಗ ಬೇರೆಂದರಿಯಲಿಲ್ಲ ನೋಡಾ,
ನಿಜದ ನಿರ್ವಯಲಲ್ಲಯ್ಯನೆ.
Transliteration Aṅgaiyoḷagaṇa liṅgamūrtiya kaṅgaḷalliṅgagoṭṭaḍe,
tiṅgaḷa sūḍanāde nōḍā ayya.
Maṅgaḷamūrti gaṅgājūṭāṅgamaya
kapilasid'dhamallikārjunaliṅga bērendariyalilla nōḍā,
nijada nirvayalallayyane.