ವಚನ - 1571     
 
ಪ್ರಸಾದ ಪ್ರಸಾದವೆಂದು ಆಡಂಬರಿಸುವ ಅಣ್ಣಗಳ ಪಥ ನೋಡಿ ಕೈಬಡಿದು ನಕ್ಕಂತಾಯಿತಯ್ಯಾ. ಪ್ರಸಾದವಿಲ್ಲದಿರೆ ಲೋಕರಂಜನೆಯೊ ಪ್ರಸಾದವೊ? `ಬಹು ವರ್ತಂತೇ ಪ್ರಾಣಿನೋ ಬಹುಶಃ ಶಿವೇ' ಎಂಬ ವೀರತಂತ್ರ ಪುಸಿಯೇನಯ್ಯಾ? ಪ್ರಸಾದ ಪ್ರಸಾದವೆಂದು ಮುಖದೋರದೆ ಮೂಗ ಮುಚ್ಚಿ ನುಂಗುವರ ಕಂಡು ಹೊಟ್ಟೆ ಜೋಲಾಡುವಂತೆ ನಕ್ಕ ಕರುಣಾಕರ ಕಪಿಲಸಿದ್ಧಮಲ್ಲಿಕಾರ್ಜುನದೇವನು.