•  
  •  
  •  
  •  
Index   ವಚನ - 1589    Search  
 
ವಚಿಸಿ ಅನುಭವಿಯಾಗದವ ಪಿಶಾಚಿಯಯ್ಯಾ; ವಚಿಸಿ ಅನುಭವಿಯಾಗದವ ಪಂಡಿತನಯ್ಯಾ. ವಿದ್ಯೆಯೆಂಬುದು ಅಭ್ಯಾಸಿಕನ ಕೈವಶ. ಅವಿದ್ಯೆಯೆಂಬುದು ಸರ್ವರಲ್ಲಿ ವಶ. ವಿದ್ಯಾವಿದ್ಯೆಯನರಿತು ಜಗದ್ವೇದ್ಯನಾಗಬಲ್ಲಡೆ, ಮಹಾಪಂಡಿತ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Vacisi anubhaviyāgadava piśāciyayya; vacisi anubhaviyāgadava paṇḍitanayyā. Vidyeyembudu abhyāsikana kaivaśa. Avidyeyembudu sarvaralli vaśa. Vidyāvidyeyanaritu jagadvēdyanāgaballaḍe, mahāpaṇḍita nōḍā, kapilasid'dhamallikārjunā.