ವಚನ - 1593     
 
ಲೋಕ ತನ್ನೊಳಗಾದ ಬಳಿಕ, ಲೋಕದ ಸೊಮ್ಮು ತನಗೇಕಯ್ಯಾ? ಪರುಷ ತಾನಾದ ಬಳಿಕ ಸುವರ್ಣದ ಸೊಮ್ಮು ತನಗೇಕಯ್ಯಾ? ಧೇನು ತಾನಾದ ಬಳಿಕ ಅನ್ಯಗೋವಿನ ಸೊಮ್ಮು ತನಗೇಕಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನಾ.