ವಚನ - 1594     
 
ದರಿದ್ರ ಧನಾಢ್ಯಂಗಂಜುವನಲ್ಲದೆ ದರಿದ್ರಂಗಂಜುವನೆ? ದೊರೆ ಮಹಾದೊರೆಗಂಜುವನಲ್ಲದೆ ದೊರೆತನಕ್ಕಂಜುವನೆ? ಪರಶಿವಯೋಗಿ ಅಂತರ್ಯಾಮಿಗಂಜುವನಲ್ಲದೆ, ಲೋಕದ ಗುಂಗಿಗಳಿಗಂಜುವನೆ, ಕಪಿಲಸಿದ್ಧಮಲ್ಲಿಕಾರ್ಜುನಾ.