ವಚನ - 1595     
 
ಭಾವಕ್ಕಂತರ್ಯಾಮಿಯಲ್ಲದೆ, ನಡೆವ ಆಚಾರಕ್ಕೆ ಅಂತರ್ಯಾಮಿಯೇನಯ್ಯಾ? ಭಾವಕಿ ಹಾವಭಾವಕ್ಕನುಕೂಲೆಯಲ್ಲದೆ, ನಿರ್ಭಾವಂಗನುಕೂಲೆಯೇನಯ್ಯಾ? ಭಾವ ಭಕ್ತಿಯಲ್ಲಲ್ಲದೆ ವೀರಭಕ್ತಿಯಲ್ಲೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ?