ವಚನ - 1596     
 
ಆಕಾಶ ಪಾಷಾಣ ಮಾಡಬಲ್ಲಾದಡೆ ಯೋಗಿ. ಪಾಷಾಣ ಆಕಾಶ ಮಾಡಬಲ್ಲಾದಡೆ ಯೋಗಿ. ಆಕಾಶದಲ್ಲಿಯ ಬಯಲು ಪಾಷಾಣದಲ್ಲಿಪ್ಪುದು ಏಕೀಯವಾಗಬಲ್ಲಾದಡೆ ಶಿವಯೋಗಿ; ಕಪಿಲಸಿದ್ಧಮಲ್ಲಿಕಾರ್ಜುನ ಆತನೆ ನೋಡಾ.