ಒಂದಾಕಳು ಒಂಬತ್ತೂರ ಸೋದು ಸವಿಯಹೋದಡೆ,
ಕೈವಲ್ಯ ಸೂರೆಯೆಲ್ಲಿಹುದಯ್ಯಾ?
ಒಂಬತ್ತು ಆಕಳು ಒಬ್ಬ ಸೋದ
ಸವಿಗಾರಂಗೆ ಬೇಹುದೇನಯ್ಯಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ?
Transliteration Ondākaḷu ombattūra sōdu saviyahōdaḍe,
kaivalya sūreyellihudayyā?
Ombattu ākaḷu obba sōda
savigāraṅge bēhudēnayyā,
ele kapilasid'dhamallikārjunā?